ಬಂಡಾಯ ಕಾವ್ಯಕ್ಕೆ ಉದಾಹರಣೆ ಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ === ೨೦೦೦ ಮೇ ೧೧ === ಉದಾ: ( ೨೦೦೦ ಮೇ ೧೧ಕ್ಕೆ ಭಾರತದ ಜನಸಂಖ್ಯೆ ೧೦೦ಕೋಟಿತಲುಪಿದೆ ) (ವಿಶ್ವದಲ್ಲಿ ಭಾರತಕ್ಕೆ ಭ್ರಷ್ಟತೆಗೆ ಮೊದಲ ಸ್ಥಾನವೆಂದು ಪತ್ರಿಕಾವರದಿ ಬಂದಿದೆ) ರಚನೆ (ಚಂ) ಏಸುವಿಗೆ ಎರಡು ಸಾವಿರ ವರ್ಷ, ಭಾರತ ಮಾತೆಗೋ ನೂರು ಕೋಟಿ ಸಂತಾನ, ಬೇಂದ್ರೆ ಕಣ್ಣೀರಿಟ್ಟು ಬರೆದಾಗ ಕೇವಲ ಮೂವತ್ಮೂರು ಕೋಟಿ ಹೆಳವರೆಷ್ಟೋ, ಕುರುಡರೆಷ್ಟೋ,-ಅವರೆಂದದ್ದು. ||೧|| ಮತ್ತೆ ಅದೇ ಕಥೆ ; ಇತಿಹಾಸ ಪುನರಾವರ್ತನೆ, ಬರಗಾಲದಲಿ ಬೆಂದವರೆಷ್ಟೋ, ಬಿರುಗಾಳಿಯಲಿ ಸತ್ತವರೆಷ್ಟೋ, ಬಡತನದ ಬೇಗೆಯಲಿ ನೋಯುವವರ- ಲೆಖ್ಖ ತೆಗೆಯ ಬೇಕಷ್ಟೆ ! ||೨|| ಬಿಡುಗಡೆಯ ಭಾಷ್ಪ ಬಿದ್ದು ಐವತ್ತು ವರ್ಷ, ಅಷ್ಟರಲಿ ಬೆಳದದ್ದು ಸರ್ವತೋಮುಖ, ಎದ್ದು ಕಾಣುವುದು -ಸಂತಾನ ಭಾಗ್ಯ. ಅದರೊಳಗೆ ಭ್ರಷ್ಟರದೇ - ಸಾಮ್ರಾಜ್ಯ ಅದಕ್ಕೆ ವಿಶ್ವದಲಿ ನಮಗೇ ಮೊದಲ ಸ್ಥಾನ. ||೩|| ಧರ್ಮ ಜಾಗ್ರತಿಯ ಚಳವಳಿಯೋ, ಸಂಸ್ಸೃತಿಯ ಮೆರುಗು ಪ್ರವಚನವೊ, ಕೇರಿಕೇರಿಯಲಿ ಗಂಟೆ ಮೊಳಗು - ದೇವರೆಷ್ಟೋ ! ಕೂಗಿ ಕರೆವರೆಷ್ಟೋ ,ಮೌನದಲಿ ಮೊರೆಯೆಷ್ಟೋ! ಕೇಳಿಸಿಕೊಂಡಿದ್ದಕ್ಕೆ ಪ್ರಮಾಣವೆಲ್ಲಿ ? ||೪|| ಕಂದಾಚಾರ, ಬಯಲಾಡಂಬರದ ಪಾದದಡಿ, ಸತ್ಯ , ಪ್ರಾಮಾಣಿಕತೆ, ಶಾಂತಿ ಸೊರಗಿ, ಭ್ರಷ್ಠತೆಯ ಮಸಿ ನುಂಗಿ ಬಣ್ಣಗಳೆಲ್ಲ ಶೂನ್ಯ. ಅಂಧಶ್ರದ್ಧೆ, ಗುಂಡು-ರಕ್ತದೋಕುಳಿಯಲ್ಲಿ ರಾಮ ರಾಜ್ಯದ ಕನಸು ಕನಸಾಗಿಯೇ ಹೋಯ್ತು! ||೫|| == ನೋಡಿ == ಕನ್ನಡ ಸಾಹಿತ್ಯ ಪ್ರಕಾರಗಳು | ಕನ್ನಡ ಕಾವ್ಯ ಪ್ರಕಾರಗಳು | ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ == ಆಧಾರ ==